ಬೆಳಗಾಯಿತು ಬೆಂಗಳೂರು ಬೆಳಗಾಯಿತು ಬೆಂಗಳೂರು
ದಿನದ ದಿನಚರಿ ತಯ್ಯಾರಿ ಮಾಡಿರಿ...
ದಿನದ ದಿನಚರಿ ತಯ್ಯಾರಿ ಮಾಡಿರಿ...
ರೇಡಿಯೋ, ಟಿವಿ, ಪತ್ರಿಕೆಗಳ ಓದಿರಿ
ಟ್ರಾಫಿಕ್ಕು ಜಾಮಿನ ಸುದ್ದಿಯ ತಿಳಿದು ಕೊಳ್ಳಿರಿ
ಆಫೀಸು ಕೆಲಸದ ದಾರಿಯ ಗುರುತಿಸಿರಿ
ಗಾಡಿ ಕಳುವಾಗಿದೆಯೋ ಇಲ್ಲವೋ ನೋಡಿರಿ
ಗಾಡಿ ಇದ್ದರೇ ಹತ್ತಿರಿ ಓಡಿರಿ
ಇಲ್ಲದೆ ಹೋದರೆ ಪೋಲಿಸಿಗೆ ದೂರಿರಿ
ಮದ್ಯಾನ್ಹ ಆಯಿತು ಊಟವ ಮಾಡಿರಿ
ಹೊಟ್ಟೆ ತುಂಬಾ ಉಂಡು ಕೆಲಸವ ಮಾಡಿರಿ
ಸಂಜೆಯಾಯಿತು ಪ್ಯಾಕ್ ಅಪ್ ಮಾಡಿರಿ
ಟ್ರಾಫಿಕ್ಕಿನ ಸುದ್ದಿಯ ಎಲ್ಲರನ್ನೂ ಕೇಳಿರಿ
ಮನೆಯ ಸೇರಿ ದಿನಚರಿಗೆ ವಿದಾಯ ಹೇಳಿರಿ
ಮತ್ತೆ ನಾಳಿನ ದಿನಚರಿ ತಯ್ಯಾರಿಯ ಮಾಡಿರಿ
2 comments:
illina maklige "ondu eradu baalele haradu" badlige idanna helkodbahudu
hmmm right....
Post a Comment