Monday, February 17, 2014

ಏನರೆ ಬರಿತಾನ್ರಿ ಪಾ

ಭಾಳ ದಿಣಗೋಳ ಆದು ಏನೂ  ಬರದಿಲ್ಲ ಅಂತ ಕೈ ಕೆರ್ಯಾಕತ್ತಿತ್ತು , ಅದಕ್ಕ ಏನರೆ ಗೀಚಿ ಬಿಡುನೂ  ಅಂತ ಅನಕೊಂಡೆನ್ ನೋಡ್ರಿಪಾ ... ತಲಿ ತಿಂಧಂಗ ಆಗತಿದ್ರು ಏನ್ ಮಾಡಕ್ ಆಗಂಗಿಲ್ಲ, ಯಾಕಂದ್ರ ನಾ ಏನ್ ನಿಮ್ಮ ಅಪ್ಪನ ಮನೀ ಗಂಟ ತಿಂದಿಲ್ಲ :-)

ಮಾನಸಿಕ ಆಗಬ್ಯಾಡ್ರಿ ಪಾ, ಸುಮ್ಮ್ ಹಂಗ ಅನ್ನಿ... 

ಮದಿವಿ ಆತು, ಮಗಾ  ಆದ, ಮಣಿ, ಗಾಡಿ  ... ಎಲ್ಲಾ ಆತು, ಆದ್ರ ಹಳಿ ಲೈಫ್ ಮರ್ತ ಬಿಟ್ನಲ್ಲಾ  ಅಂತ ತಲೀ ಕೆಟ್ಟ ಹೋಗಿತ್ತು ... ಖರೆ, ಹೊಳ್ಳಿ ಬರಸಬಹುದು ಅಂತ ಸುದಕ   ಮರ್ತ್ ಹೋಗಿತ್ತ ನೋಡ್ರಿಪಾ ...

ಅದಕ್ಕ ಬಾಯನ ಹಲ್ಲ, ತಲ್ಯಾನ್ ಕೂದ್ಲ ಎಲ್ಲಾ ಕಿತಗೊಂಡ ಹೋಗುದ್ರೊಳಗ ಉಳಸು ಪ್ರಯತ್ನ ಅರೆ ಮಾಡುನು ? ಏನಂತೀರಿ ?

ಹಿಂತ ಕಥಿ ಬರ್ಯವ್ರು ಹೆಚ್ಚಾನ್ ಹೆಚ್ಚ ಹುಚ್ಚರ ಇರತಾರ್ ಯಾಕ ಅಂದ್ರ ನನ್ನ ದೋಸ್ತರ ಪಟ್ಟಿ ಒಳಗ ಇಬ್ಬ್ರು ಸಿಕ್ಕಾರ ಅವರೂ ಹಿಂತಾದ ಕೆಲಸಾ  ಮಾಡ್ತಾರ , ಉದಾಹರಣಿಗಿ ಪ್ರಕಾಶ ಬಾಬು(ವೈದ್ಞಾನಿಕ )(http://prakashsidaraddi.blogspot.in/) , ಸಿಧ್ಧಾರ್ಥ ಭಟ್ಟ(ಸಾಹಿತಿ)( http://manadani.blogspot.com/). ನಾ ಇವರಿಬ್ರ  ನಡಕಿನ್ನಾವ ನೋಡ್ರಿಪಾ

ಹೋಗ್ಲಿ ಪಾಯಿಂಟ್ ಗಿ ಬರುನು , ತಳಗ ಒಂದಿಷ್ಟು ಸನ್ನು-ಸನ್ನು ಹನಿಗವನ ಬರೀತೆನಿ, ಉತ್ತರ ಕರ್ನಾಟಕದ ಭಾಷೆ ಒಳಗ , ಮನಸ್ಸಿಗೆ ಹಚ್ಹ್ಕೊದಂಗ ಓದಿ ಮಜಾ ಮಾಡ್ರಿ , ಇಲ್ಲಂದ್ರ ನಿಮಗ ಗೊತ್ತ್  ಐತಿ ಅಲ್ಲ, ನಾ ಏನ್ ನಿಮ್ಮ ಅಪ್ಪನ ....

೧.  ಕೈಯಾಗ ಹಿಡದೇನಿ ಲ್ಯಾಪ್ಟಾಪು,
     ತಲೀ ಒಳಗ ಬರೀ ತಾಪು ತಾಪು ,
     ಮೈ, ಕೈ ಅನ್ತಾವ ಬಿಡ ಸಾಕು ಸಾಕು ,
     ಏನ್ ಮಾಡ್ಲಿ ಅವನೌನ್ ಕಂಪನಿಕೊಡಂಗಿಲ್ಲ ಹೈಕು ಹೈಕು

ಹೆಂಗ್ ಇತ್ತ ? ತೊಗೊರಿ ಇನ್ನೊಂದ

೨. ಹೊಸ ಮೊಬೈಲ್ ತೊಗೊಂಡಾನ  ಗೂಗಲ್ ನೆಕ್ಸಸ್
     ಕಾರಣ ಹೇಳ್ತಾನ ಹಳೀ ಮೊಬೈಲ್ ಇತ್ತ ಭಾಳ ಸಾವಕಾಸ್
     ಕಿಸ್ಯಾಗ ರೋಕ್ಕ್ ಹೆಚ್ಚಾಗಿದ್ರ ಹೆಂತಿಗಿ ಒಂದ ಸೀರಿನೂ ತರಬಹುದ್ ಇತ್ತ
     ದೊಸ್ತ್ರ ಅಂತಾರು, ತಿಂಡಿ  ಕೇಳಾಂಗ್ ಇಲ್ಲ ಹೊಯ್ಕೊಂತ ಹೋಗ ಅತ್ತ

ಇನ್ನೂ ಬೇಕಾ ? ತೊಗೊ ಅವನೌನ್

೩. ಕಟ್ಟಿ ಮ್ಯಾಲ್ ಕುಂತ ಹರಟೆ ಹೊಡ್ಯು ಹೆಂಗಸೂರ್ ಚೊಲೊ
     ಎಲ್ಲಾ ಮುಗದ್ ಮ್ಯಾಲ್ ಹೆಂಗಸೂರ್ ಅಂತಾರ್ ನಾಳಿ ಸಿಗುನ್ ಚಲೋ
     ಕುಡ್ಯಾಕ್ ಕುಂತ ದೋಸ್ತರ ಭಾಳ ಕೆಟ್ಟ
     ಹಳೀ ನೇನಪ ತಗದ್ ಹೊಗ್ತಾರ ತಲ್ಯಾಗ್ ಹುಳಾ ಬಿಟ್ಟ
     
೪. ಖಾಲಿ ತಲಿ ಸ್ಮಶಾನ ದಂಗ ಅಂತ
     ಕೇಳ್ರಿ  ಇಲ್ಲಿ , ಖಾಲಿ ತಲಿ ಸ್ಮಶಾನ ದಂಗ ಅಂತ
     ಉದಾಹರಣಿ ನೋಡ್ರಿ, ದಿಲ್ಲಿ ಒಳಗ ಆಮ್ ಆದ್ಮಿ ಪಾರ್ಟಿ ಬಂತ

೫. ಮೋದಿ ಗಿ ವೋಟ್ ಹಾಕಿ ದೇಶ ಉಳಿಸ್ರಿ
     ಇಲ್ಲಾಂದ್ರ ಹಾಳ್ ಭಾವಿಗಿ ಬಿದ್ದ ಸಾಯ್ರಿ

೬.  ಎಲ್ಲಾ ಓದಿದ ಮ್ಯಾಲ್ ಚೊಲೋ ಅನಿಸಿದ್ರ ಕೆಳಗ ಒಂದೆರಡ ಕಮೆಂಟ್ ಬಿಡ್ರಿ
      ಇಲ್ಲಾ ಅಂದ್ರ ಬಸ್ ಸ್ಟಾಂಡ್ ನ್ಯಾಗ್ ಗಾಡಿ ರೆಡಿ ಐತಿ, ಮನಿಗಿ ನಡ್ರಿ

೭. ಮನಸ್ಸಿಗಿ ಹಚ್ಕೊ ಬ್ಯಾಡ್ರಿ , ಇದರಾಗ್ ಏನ್ ಪರ್ಸನಲ್ ಇಲ್ಲ
     ನಾ ಯಾರ್ ಅಂತ ನಿಮಗ ಗೊತ್ತ ಐತಿ ಅಲ್ಲ?
     ಹೆಚ್ಚು  ಕಡಿಮಿ ಅಂದ್ರ ಕೊಡತೆನಿ ಎರಡ, ಕೆಂಪ ಆಕಾವ ಎರಡು ಗಲ್ಲ


ಹೋಗ್ಲಿ ಮಜಾಕ್ ಸಾಕು, ಮತ್ತೊಮ್ಮಿ ಮೂಡ ಬಂದಾಗ್ ಏನರೆ ಬರಿತೆನಿ, ಅಲ್ಲಿ ತನಕ... ಟಾಟಾ ಬಾಯಿ ಬಾಯಿ

1 comment:

Prakash said...

ಅವನೌನ, ಯಾವಾಗ ಲೆ ನಿನಗ ಇಸ್ಠು ಟೈಮ ಸಿಕ್ಕತು. ಯೇನ್ರ ಇರಲಿ, ಬಾಹ್ಳ ಚಲೋ ಬರ್ದಿ ಪಾ.