Friday, February 21, 2014

ಬಿ ಇ ಸಿ ಅಭಿಯಂತರರು

ಇಲ್ಲಿ ಬರೆದಿರುವಂತಹ ಎಲ್ಲಾ ವಿಷಯಗಳು ಹಾಸ್ಯ ಹಾಗೂ ಟೈಮ್ ಪಾಸ್ ಮಾಡುವ ಕಥೆಗಳು, ಯಾರೂ  ಇದನ್ನು  ಓದಿ ತಲೆ, ಅಥವಾ ಮೈ ಪರಚಿಕೊಂಡು ಯಾರ ಜೊತೆ ಕೂಡ ಜಗಳ ಮಾಡದೆ ಓದಿ ಮಜಾ ಮಾಡಬೇಕಾಗಿ ವಿನಂತಿ.
ಯಾವದೇ ವಿಷಯ ನಿಮ್ಮ ವ್ಯಕ್ತಿತ್ವ ಅಥವಾ ಪ್ರೊಫೆಶನಗೆ ಧಕ್ಕೆ ತರುವ ಹಾಗೆ ಎನಿಸಿದರೆ, ನಾನು ಕಾಗೆ ಹಾರಿಸಿತಿರುವೆ ಅಂತ ಭಾವಿಸಿ ಮರೆತು ಬಿಡಿ

ನೀವೇನಾದರು ಮೆಂಟಲ್, ಮಾನಸಿಕ ಅಥವಾ ಮೆಂಟಲ್ imbalance ಇಂದ ಬಳಲುತ್ತಿದ್ದರೆ ಇಲ್ಲಿಗೆ ನಿಲ್ಲಿಸಿ, ಪ್ರಾಣೇಶ್ ಅವರ ಆಡಿಯೋ ಕೇಳಿ ಪುನಃ ಬನ್ನಿ

ಹೋಗ್ಲಿ ಶುರು ಹಚ್ಚಿಕೊಳ್ಳೋಣಾ ?

ಎಲ್ಲ ದಿಕ್ಕಿನಲ್ಲಿ, ಎಲ್ಲಾ ಬೀದಿಗಳಲ್ಲಿ ಇರುವ ಮನೆಗಳಲಿ ಇರುವ ಹುಡುಗಿಯರ ಪಟ್ಟಿ ಪಟಿಸಿ, ಶಾಲೆಯ ಸಮಾಜ ಶಾಸ್ತ್ರದ ಪುಸ್ತಕ ಪಟಿಸದೇ , ಕಾಲೇಜು ಮತ್ತೆ ಸರ್ಕಲ್ ಕಟ್ಟೆಗಳ ಮೇಲೆ ಕುಳಿತು ಹರಟೆ ಹೊಡೆಯುವ ಹುಡುಗರ ಗುಂಪು.

ಪರೀಕ್ಷೆ ಮುಗಿದು, ಪಾಸ್ ಅಥವಾ ನ-ಪಾಸ್ ಆಗಿದ್ದೇನೆ ಅಂಥ ಗೊತ್ತೇ  ಇಲ್ಲದಿರುವ  ಈ ಹುಡುಗರಿಂದ ಬರುವುದು ಅಭಿಯಂತರರ ಕಂಪು

 ಹೋಗ್ಲಿ ಅಭಿಯಂತರ ಅಂದ್ರೆ ಇನ್ನು ತಿಲಿಯಲಾಗದಿದ್ದಲ್ಲಿ , ಅದರ ಅರ್ಥ ಇಂಜಿನಿಯರ್ ಸಾಹೇಬ್ರು ಅಂತ.
ಇದೆ ಹಿನ್ನೆಲೆಯಲ್ಲಿ ಕೆಲವರ ಜಾತಕ, ಅಥವಾ ಕುಂಡಲಿ ಹಾಕುವ ಪ್ರಯಾಸ ಮಾಡಿರುತ್ತೇನೆ, ಓದಿ, ಹಾರಿಸಿ ಬೂದಿ ಮರೆತು ಬಿಡಿ... 

ಗಣಕತಂತ್ರ ಅಭಿಯಂತರರು (ಸಾಫ್ತ್ವೇರೆ ಇಂಜಿನಿಯರ್) ಕಥೆ 
ಕುರುಡರಲ್ಲಿ ಮೆಳ್ಳ ಕಣ್ಣು ಶ್ರೇಷ್ಟ ಅನ್ನೋ ಗಾದೆ ಮಾತಿನಂತೆ ಈ ಜೀವದ ಕಥೆ. ಓದುವ ಹವ್ಯಾಸ ತುಂಬಾ ಇರುವ ಈ ಜೀವ, ಡಾಕ್ಟರ್  ಆಗುವ ಕನಸು ಕಂಡು, ಸೀಟ್ ಸಿಗದ ಕಾರಣ ಇಂಜಿನಿಯರ್ ಆಗಲು ಬಂದಿರುವ ಜೇವ. ಕೆಲವರು ಕಂಪ್ಯೂಟರ್ ಅಂದ್ರೆ ಇಷ್ಟ, ಕೆಲವರು ಅಪ್ಪ, ಅಮ್ಮ, ಅಣ್ಣ ಅಥವಾ ಯಾವದೋ ಒಬ್ಬ ಸಂಭಂದಿಕ ಹೇಳಿದ ಕಥೆ ಕೇಳಿ ಸೀಟ್ ಆಯ್ಕೆ ಮಾಡಿಕೊಂಡು ಬಂದಿರುವ ಜೀವಗಳೂ ಸಾಕಷ್ಟು ಸಿಗುವವು.

ಹುಡುಗಿಯರನ ಕನ್ನೆತ್ತಿ ನೋಡದೆ, ಗುರುಗಳ ಜೈಕಾರ ಹಾಡುತ, ಕಾಲೇಜಿನ ಉತ್ತಮ ಶಿಷ್ಯ ಅನಿಸಿಕೊ ಆಸೆ ಇವರದು

ಇಲೆಕ್ಟ್ರಾನಿಕ್ ಇಂಜಿನಿಯರ್
ಇವರು ಪಾಪ, ತ್ರಿಶಂಕು ಪರಿಸ್ತಿತಿಯ ಭೂತಗಳು. ಇತ್ತಕಡೆ ಹೈ-ಫೈ ಮಾರ್ಕ್ಸು ಇಲ್ಲ, ಇತ್ತಕಡೆ ಜುಜಬಿ ಮಾರ್ಕ್ಸು ಇಲ್ಲ, ಮಧ್ಯೆ ಸಿಕ್ಕಿಕೊಂಡ ಸೀದಾ ಸಾದಾ ಜೀವಿಗಳು
ಇವರಿಗೆ ಅಬ್ಯಾಸದ ಕಡೆ ಗಮನ ಹರಿಸದೆ ಹೋದರೆ ಕೈಗೆ ಚಂಬು ಕಂಪಲ್ಸರಿ , ಇವರ ವಿಷಯಗಳೇ ಅಷ್ಟು ಕಠಿಣ

ಮೆಕ್ಯಾನಿಕಲ್ ಇಂಜಿನಿಯರ್
ಇವರು ನೋಡ್ರಿ ಕಾಲೇಜಿನ ಗೋಡೆಗಳಿಗೆ ಬಣ್ಣ ಹಚ್ಚುವ, ಜುಜಬಿ ಮಾರ್ಕ್ಸು ಪಡೆದು, ಪಾಸ್ ಯಾವ ಮೇಷ್ಟ್ರು ಮಾಡಿದ್ದು ಅಂತ ಕೂಡ ಗೊತ್ತಿಲ್ಲದ ಮಹಾನ್ ಜೀವಗಳು
ತಮ್ಮ ಸ್ವಂತ ಕ್ಲಾಸ್ ಬಿಟ್ಟು ಎಲ್ಲ ಕ್ಲಾಸಿನ ವಿಳಾಸ ಗೊತ್ತಿರುವ ಏಕಮಾತ್ರ ಶಿಷ್ಯರ ಗುಂಪು. ಓದಿದರೆ ತಲೆಯಲಿ ಶಬ್ದ ಕೂಡ ಇಳಿಯದ, ಬರೆಯಲು ಪೆನ್ ಕೂಡ ಸಾಕದ ನಿಷ್ಟಾವಂತ ಗಲಾಟೆ ಕೋರರು ಇವರೆ

ಸಿವಿಲ್, ಎಲೆಕ್ಟ್ರಿಕಲ್ ಹಾಗೂ ಮತ್ತಿತರರು 
ಇವರೂ ಸ್ವಲ್ಪ ಮೆಕ್ಯಾನಿಕಲ್ ಥರ ಜೀವಿಗಳೇ ಹೊರತು ಇವರಿಗೆ ಸ್ವಲ್ಪ ಅಂಜಿಕೆ, ಮಾನ, ಮರ್ಯಾದೆ ಅನ್ನೊ ಕೆಲವಾದ ಶಬ್ದಗಳ ಪರಿಚಯ ಅಷ್ಟೇ.
ಬೇರೆ ಎಲ್ಲಾ ಬ್ರಾಂಚಿನ ಸಿಷ್ಯರ ಜೊತೆ ಇವರ ವಹಿವಾಟು ಸ್ವಲ್ಪ ಜಾಸ್ತಿ, ಮೆಕ್ಯಾನಿಕಲ್ ಮಹಾನುಭಾವಗಳು ಇವರಿಗೆ ಬಾಡಿ ಗಾರ್ಡ್ ಥರ, ಇವರ ಕ್ಲಾಸಿನ ಹುಡುಗಿಯರಿಗೆ ಬಂದೋಬಸ್ತ್ ಮಾಡೋ ಜವಾಬ್ದಾರಿ ಮೆಕ್ಯಾನಿಕಲ್ ಹುಡುಗರದೆ.
ಬೇಲಿಯೇ ಎದ್ದು ಹೊಲ ಮೇಯುವ ಗಾದೆ ಮಾತಿನಂತೆ, ಹುಡುಗಿಯರನ ಪಟಾಯಿಸುವ ಕಾರ್ಯ ಯಾರದು ಅಂತ ಗೊತ್ತಾಗಿರಬಹುದು 

ಕಲ್ಚರಲ್ ಅಕ್ಟಿವಿಟಿಗಳಲ್ಲಿ ಇವರು ಎತ್ತಿತ ಕೈ ಆಟ, ಓಟ, ಕುಣಿತ ಹಾಗೂ ಇನ್ನಿತರ ಸಾಂಸ್ಕೃತಿಕ ಆಚರಣೆಗಳು ಇವರ ಮುಖ್ಯ ಕೆಲಸಗಳು

No comments: