Sunday, April 12, 2020

ಸುಮ್ಮನೆ ಗೀಚಿದೆ







ವರುಷಕ್ಕೆ ಒಮ್ಮೆ ಜ್ವರ ಬಂದಂತೆ ,
ವಯಸ್ಸಾದಾಗ ತಲೆಯ ಕೂದಲು ಹಾರಿ ಹೋದಂತೆ ,
ಕೆಮ್ಮು ನೆಗಡಿ ಬಂದು ಹೋದಂತೆ ,
ಕೊರೊನ ಬಂದು ಹೋಗುತ್ತೆಯೆ ?

ನಿನ್ನ ಜೀವ ಗಟ್ಟಿ ಇರಬಹುದು ,
ನಿನ್ನ ಶಕ್ತಿ ಮೇಲಿರಬಹುದು ,
ನಿನ್ನ ಯುಕ್ತಿ ಜಾಸ್ತಿ ಇರಬಹುದು ,
ನಿನ್ನ ಕಾಲ ನಿನ್ನ ಕೈಯಲ್ಲಿರುವುದೇ ?

ಗಾಳಿಯಲ್ಲಿ ಹೊಗೆ ಮಾಯವಾದಂತೆ,
ದಿನದಿಂದ ಬೆಳಕು ಮಾಯವಾದಂತೆ,
ದೇಹದೊಳ್ ಜೀವ ಮಾಯವಾಯಿತೇ?
ಪ್ರಭುಪಾದ ಸೇರಿಹೋಯಿತೆ ?

ಜೀವಮಾನದಲ್ಲಿ ನೋಡದ  ಜೈಲಿನ ಗೋಡೆ ,
ಜನ ಜಾತ್ರೆಯಲಿ ಮಾಡಿದ ಜೀವನ ,
ನನ್ನ ಮನೆ ಒಂದು  ನಂದನವನ ,
ಈಗ ಅದೇ ಮನೆ ಸೆರೆಮನೆ ಆಗಿಹೋಯಿತೇ?



Thursday, November 3, 2016

ನಿಂತಲ್ಲಿ ಈ ಪರದಾಟ

ಕವಿಯ ಮೆದುಳು ಸಿಕ್ಕರೆ
ಮೊಸಳೆ ಕಣ್ಣೇರು ಬಿಟ್ಟು ಇಟ್ಟಿತು ಬಾಯಲ್ಲಿ ಸಕ್ಕರೆ

ಮಕ್ಕಳ ಮೊಗವ ನೋಡಿ ತುಂಬಿ ಬಂತು ಅಕ್ಕರೆ
ರಾತ್ರಿ ಕುಂತು ತಲೆ ಕೆಡೆಸಿಕೊಂಡು ಕೂದಲೆಲ್ಲಾ ಆಗಿವೆ ತಾವರೆ

---------------------------------------------------------------------------
ಕವಿತೆ ಬರೆವ ಹುಚ್ಚಿನಲ್ಲಿ
ರಾತ್ರಿ ಹೊತ್ತ ತಂಪಿನಲ್ಲಿ
ಬರೆದೆ ಒಂದು ಕವಿತೆ ಇಲ್ಲಿ

ಸಾಧಿಸುವ ಛಲ ತೊಟ್ಟು
ಮರೆತೇ ಬಿಟ್ಟೆ ಒಬ್ಬಟ್ಟು
ಈಗ ನನ್ನ ಮೇಲೇ ನನಗೇ ಸಿಟ್ಟು !

---------------------------------------------------------------------------
ಜಗವೆಲ್ಲ ನೋಡಿದ್ದಾಯ್ತು
ಹಟವೆಲ್ಲ ಸಾಧಿಸಿದ್ದಾಯ್ತು
ಯವ್ವನ ಮುಗಿಯೋ ಹೊತ್ತಾಯ್ತು
ಗೊತ್ತೇ ಆಗ್ಲಿಲ್ಲ ಕಾಲ ಹೇಗೆ ಹೊರಟೋಯ್ತು

---------------------------------------------------------------------------
ದಿನವಿಡೀ ಕೆಲಸದ ಜಂಜಾಟ
ಹಲವು ಬಾರಿ ಮರೆತೆ ಊಟ
ಮರೆತೋಯ್ತು ಶಾಲೆಯ ಆ ಪಾಠ ಆಟ
ಅನಿಸುತಿದೆ ಯಾಕೋ ... ನಿಂತಲ್ಲಿ ಈ ಪರದಾಟ 

Monday, January 19, 2015

ಮತ್ತೆ ಬಂತು ಸೀಸನ್ನು, ಕೈಯಲ್ಲಿ ಹಿಡಿಯುವ ಪೆನ್ನನ್ನು

ಮತ್ತೆ ಬಂತು ಸೀಸನ್ನು, ಕೈಯಲ್ಲಿ ಹಿಡಿಯುವ ಪೆನ್ನನ್ನು 


ಕವಿತೆ ಬರೆವ ಹುಚ್ಚಿನಲ್ಲಿ,
ರಾತ್ರಿಯ ಹುಸಿ ಮಿಂಚಿನಲ್ಲಿ,
ಹುಳಗಳ ಚಿರ್ರೆಂಬ ಸದ್ದಿನಲ್ಲಿ,
ಚಳಿಗಾಲದ ಕೊರೆಯುವ ಈ ಚಳಿಯಲ್ಲಿ
ಬರೆವೆ ಒಂದು ಕವಿತೆಯ, ಬರೆವೆ ಒಂದು ಕವಿತೆಯ...

ಕಣ್ಣು ನಿದ್ದೆ ತಾಳಳರ್ದೆ,
ಜೂರವರಿಯಲ್ಲಿ ಮುಂದೆ ವರೆದೆ,
ಅಲ್ಲೇ ಎಷ್ಟು ಚೆನ್ನಾಗಿದ್ದೆ,
ಇಲ್ಲೇ ಯಾಕೆ ಸಿಕ್ಕು ಬಿದ್ದೆ,
ವಡಪ ಏನು ತಿಳಿದೆಯ, ವಡಪ ಏನು ತಿಳಿದೆಯ?


Monday, February 24, 2014

ದೇವರ ಹುಡುಕಾಟದಲ್ಲಿ



ನೀನೇನು ಬಲ್ಲೆ ಜೀವನದ ಹೊರೆ
ಭೂಲೋಕಕ್ಕೆ ಕಳಿಸಿ ಆಗಿರುವೆ ದೊರೆ

ಹೇಗೆ ಮಾಡಲಿ ನಾ ನಿನಗೆ ಕರೆ
ಎಷ್ಟು ಉಜ್ಜಿದರೂ ಬರದು ಈ ಜೆವನದಿಂದ ನೊರೆ

ನಿನ್ನ ಹೆಸರು ಭೂಲೋಕದಲ್ಲಿ ಹಲವು
ನಿನ್ನೋಲಿಸಿದರೆ ಬರುವುದು ಎಲ್ಲಿಲ್ಲದ ಬಲವು
ಎಲ್ಲಾರು ತೋರಿಸುವರು ದಾರಿಗಳು ಹಲವು
ಏನು ಮಾಡಲಿ ಗಳಿಸಲು ನಾ ನಿನ್ನ ಒಲವು

ಹುಡುಕಾಡಿದೆ ಎಲ್ಲಾ ಗುಡಿ-ಗುಂಡಾರಗಳ
ಕೂಡಿಸಲು ಹೊರಟಿದ್ದೆ ಸ್ವರ್ಗಕ್ಕೆ ನಳ
ಸಿಗಲಿಲ್ಲ ನನಗೆ ಸೂಕ್ತವಾದ ಸ್ಥಳ
ಗೊತ್ತಾಯ್ತು ನನಗೆ ನೀ ಸಿಗುವುದೇ ವಿರಳ

ಅರಿವಾಯ್ತು ನನಗೀಗ ನೀನೆಲ್ಲೂ ಇಲ್ಲ
ಮೋಸ ಹೋದೆ ನಾ ಕೇಳಿ ಜನರೇಳಿದ ಸುಳ್ಳ
ನನ್ನಲೊಳಗೆ ನೀನುರುವೆ ಹೌದೇನೋ ಕಳ್ಳ?
ಇನ್ನ್ಯಾರೂ ಮಾಡರು ನನಗೆಂದೂ ಮಳ್ಳ




ದುಡ್ಡಿನ ಘಂಟಾನಾದ

ದುಡ್ಡು ದುಡ್ಡು ದುಡ್ಡು
ಇದ್ದ್ರೆ ಬಂದ್ ಹೊಡಿ ಷದ್ದು
ತಿನ್ನೋಕ್ ಸಮಯ ಇಲ್ಲ ಹೊಟ್ಟೆಗೆ ಎರಡ್ ಫಡ್ದು
ಬಡ್ಕೊಂತಿ ಯಾಕೆ ದುಡ್ಡು ದುಡ್ಡು ದುಡ್ಡು

ಗಳಿಸೋ ಹುಚ್ಚಲ್ಲಿ ದುಡ್ಡು
ಆಗೋಯ್ತು  ಪೂರ್ತಿ ಬಾಲ್ಡು
ಕಾಣ್ತಾರೆ ನಿಂಗೆ ಎಲ್ಲ ಜನ್ರು ಮ್ಯಾಡು
ಇನ್ನೂ ಬೇಕಾ ನಿಂಗೆ ದುಡ್ಡು ದುಡ್ಡು ದುಡ್ಡು

ಹೋಗ್ಲಿ ಗಳಿಸದೆ ಅನ್ಕೋ ದುಡ್ಡು
ನಿನೇನ್ ಆಗೇ ಬಿಟ್ಯ ಗಾಡು ?
ನಿನಗೂ ಬೇಕು ತಿನ್ನೋಕ್ ಪಲ್ಯ ಎರಡೇ ಸೂಡು
ಇನ್ನೂ ಬೇಕಾ ನಿಂಗೆ ದುಡ್ಡು ದುಡ್ಡು ದುಡ್ಡು

ನೆನಪಿದೆಯ ಹುಟ್ಟಿರೋ ದಿನ?
ಆವತ್ತು ಎಷ್ಟು ಇತ್ತು ಜೋಬಲ್ಲಿ ಹಣ?
ದುಡ್ದಾದರೇನು, ಗಳಿಸಿರುವೆಯಾ ಸಮಾಜದಲ್ಲಿ ಸ್ಥಾನ ಮಾನ?
ಗಳಿಸಲೇ ಬೇಕಾದದ್ದು ನಾಲ್ಕು ಜನರನ್ನ, ಕೇಡುಗಾಲದಲ್ಲಿ ಹೇಳಲು ಸಮಾಧಾನ

Friday, February 21, 2014

ಬಿ ಇ ಸಿ ಅಭಿಯಂತರರು

ಇಲ್ಲಿ ಬರೆದಿರುವಂತಹ ಎಲ್ಲಾ ವಿಷಯಗಳು ಹಾಸ್ಯ ಹಾಗೂ ಟೈಮ್ ಪಾಸ್ ಮಾಡುವ ಕಥೆಗಳು, ಯಾರೂ  ಇದನ್ನು  ಓದಿ ತಲೆ, ಅಥವಾ ಮೈ ಪರಚಿಕೊಂಡು ಯಾರ ಜೊತೆ ಕೂಡ ಜಗಳ ಮಾಡದೆ ಓದಿ ಮಜಾ ಮಾಡಬೇಕಾಗಿ ವಿನಂತಿ.
ಯಾವದೇ ವಿಷಯ ನಿಮ್ಮ ವ್ಯಕ್ತಿತ್ವ ಅಥವಾ ಪ್ರೊಫೆಶನಗೆ ಧಕ್ಕೆ ತರುವ ಹಾಗೆ ಎನಿಸಿದರೆ, ನಾನು ಕಾಗೆ ಹಾರಿಸಿತಿರುವೆ ಅಂತ ಭಾವಿಸಿ ಮರೆತು ಬಿಡಿ

ನೀವೇನಾದರು ಮೆಂಟಲ್, ಮಾನಸಿಕ ಅಥವಾ ಮೆಂಟಲ್ imbalance ಇಂದ ಬಳಲುತ್ತಿದ್ದರೆ ಇಲ್ಲಿಗೆ ನಿಲ್ಲಿಸಿ, ಪ್ರಾಣೇಶ್ ಅವರ ಆಡಿಯೋ ಕೇಳಿ ಪುನಃ ಬನ್ನಿ

ಹೋಗ್ಲಿ ಶುರು ಹಚ್ಚಿಕೊಳ್ಳೋಣಾ ?

ಎಲ್ಲ ದಿಕ್ಕಿನಲ್ಲಿ, ಎಲ್ಲಾ ಬೀದಿಗಳಲ್ಲಿ ಇರುವ ಮನೆಗಳಲಿ ಇರುವ ಹುಡುಗಿಯರ ಪಟ್ಟಿ ಪಟಿಸಿ, ಶಾಲೆಯ ಸಮಾಜ ಶಾಸ್ತ್ರದ ಪುಸ್ತಕ ಪಟಿಸದೇ , ಕಾಲೇಜು ಮತ್ತೆ ಸರ್ಕಲ್ ಕಟ್ಟೆಗಳ ಮೇಲೆ ಕುಳಿತು ಹರಟೆ ಹೊಡೆಯುವ ಹುಡುಗರ ಗುಂಪು.

ಪರೀಕ್ಷೆ ಮುಗಿದು, ಪಾಸ್ ಅಥವಾ ನ-ಪಾಸ್ ಆಗಿದ್ದೇನೆ ಅಂಥ ಗೊತ್ತೇ  ಇಲ್ಲದಿರುವ  ಈ ಹುಡುಗರಿಂದ ಬರುವುದು ಅಭಿಯಂತರರ ಕಂಪು

 ಹೋಗ್ಲಿ ಅಭಿಯಂತರ ಅಂದ್ರೆ ಇನ್ನು ತಿಲಿಯಲಾಗದಿದ್ದಲ್ಲಿ , ಅದರ ಅರ್ಥ ಇಂಜಿನಿಯರ್ ಸಾಹೇಬ್ರು ಅಂತ.
ಇದೆ ಹಿನ್ನೆಲೆಯಲ್ಲಿ ಕೆಲವರ ಜಾತಕ, ಅಥವಾ ಕುಂಡಲಿ ಹಾಕುವ ಪ್ರಯಾಸ ಮಾಡಿರುತ್ತೇನೆ, ಓದಿ, ಹಾರಿಸಿ ಬೂದಿ ಮರೆತು ಬಿಡಿ... 

ಗಣಕತಂತ್ರ ಅಭಿಯಂತರರು (ಸಾಫ್ತ್ವೇರೆ ಇಂಜಿನಿಯರ್) ಕಥೆ 
ಕುರುಡರಲ್ಲಿ ಮೆಳ್ಳ ಕಣ್ಣು ಶ್ರೇಷ್ಟ ಅನ್ನೋ ಗಾದೆ ಮಾತಿನಂತೆ ಈ ಜೀವದ ಕಥೆ. ಓದುವ ಹವ್ಯಾಸ ತುಂಬಾ ಇರುವ ಈ ಜೀವ, ಡಾಕ್ಟರ್  ಆಗುವ ಕನಸು ಕಂಡು, ಸೀಟ್ ಸಿಗದ ಕಾರಣ ಇಂಜಿನಿಯರ್ ಆಗಲು ಬಂದಿರುವ ಜೇವ. ಕೆಲವರು ಕಂಪ್ಯೂಟರ್ ಅಂದ್ರೆ ಇಷ್ಟ, ಕೆಲವರು ಅಪ್ಪ, ಅಮ್ಮ, ಅಣ್ಣ ಅಥವಾ ಯಾವದೋ ಒಬ್ಬ ಸಂಭಂದಿಕ ಹೇಳಿದ ಕಥೆ ಕೇಳಿ ಸೀಟ್ ಆಯ್ಕೆ ಮಾಡಿಕೊಂಡು ಬಂದಿರುವ ಜೀವಗಳೂ ಸಾಕಷ್ಟು ಸಿಗುವವು.

ಹುಡುಗಿಯರನ ಕನ್ನೆತ್ತಿ ನೋಡದೆ, ಗುರುಗಳ ಜೈಕಾರ ಹಾಡುತ, ಕಾಲೇಜಿನ ಉತ್ತಮ ಶಿಷ್ಯ ಅನಿಸಿಕೊ ಆಸೆ ಇವರದು

ಇಲೆಕ್ಟ್ರಾನಿಕ್ ಇಂಜಿನಿಯರ್
ಇವರು ಪಾಪ, ತ್ರಿಶಂಕು ಪರಿಸ್ತಿತಿಯ ಭೂತಗಳು. ಇತ್ತಕಡೆ ಹೈ-ಫೈ ಮಾರ್ಕ್ಸು ಇಲ್ಲ, ಇತ್ತಕಡೆ ಜುಜಬಿ ಮಾರ್ಕ್ಸು ಇಲ್ಲ, ಮಧ್ಯೆ ಸಿಕ್ಕಿಕೊಂಡ ಸೀದಾ ಸಾದಾ ಜೀವಿಗಳು
ಇವರಿಗೆ ಅಬ್ಯಾಸದ ಕಡೆ ಗಮನ ಹರಿಸದೆ ಹೋದರೆ ಕೈಗೆ ಚಂಬು ಕಂಪಲ್ಸರಿ , ಇವರ ವಿಷಯಗಳೇ ಅಷ್ಟು ಕಠಿಣ

ಮೆಕ್ಯಾನಿಕಲ್ ಇಂಜಿನಿಯರ್
ಇವರು ನೋಡ್ರಿ ಕಾಲೇಜಿನ ಗೋಡೆಗಳಿಗೆ ಬಣ್ಣ ಹಚ್ಚುವ, ಜುಜಬಿ ಮಾರ್ಕ್ಸು ಪಡೆದು, ಪಾಸ್ ಯಾವ ಮೇಷ್ಟ್ರು ಮಾಡಿದ್ದು ಅಂತ ಕೂಡ ಗೊತ್ತಿಲ್ಲದ ಮಹಾನ್ ಜೀವಗಳು
ತಮ್ಮ ಸ್ವಂತ ಕ್ಲಾಸ್ ಬಿಟ್ಟು ಎಲ್ಲ ಕ್ಲಾಸಿನ ವಿಳಾಸ ಗೊತ್ತಿರುವ ಏಕಮಾತ್ರ ಶಿಷ್ಯರ ಗುಂಪು. ಓದಿದರೆ ತಲೆಯಲಿ ಶಬ್ದ ಕೂಡ ಇಳಿಯದ, ಬರೆಯಲು ಪೆನ್ ಕೂಡ ಸಾಕದ ನಿಷ್ಟಾವಂತ ಗಲಾಟೆ ಕೋರರು ಇವರೆ

ಸಿವಿಲ್, ಎಲೆಕ್ಟ್ರಿಕಲ್ ಹಾಗೂ ಮತ್ತಿತರರು 
ಇವರೂ ಸ್ವಲ್ಪ ಮೆಕ್ಯಾನಿಕಲ್ ಥರ ಜೀವಿಗಳೇ ಹೊರತು ಇವರಿಗೆ ಸ್ವಲ್ಪ ಅಂಜಿಕೆ, ಮಾನ, ಮರ್ಯಾದೆ ಅನ್ನೊ ಕೆಲವಾದ ಶಬ್ದಗಳ ಪರಿಚಯ ಅಷ್ಟೇ.
ಬೇರೆ ಎಲ್ಲಾ ಬ್ರಾಂಚಿನ ಸಿಷ್ಯರ ಜೊತೆ ಇವರ ವಹಿವಾಟು ಸ್ವಲ್ಪ ಜಾಸ್ತಿ, ಮೆಕ್ಯಾನಿಕಲ್ ಮಹಾನುಭಾವಗಳು ಇವರಿಗೆ ಬಾಡಿ ಗಾರ್ಡ್ ಥರ, ಇವರ ಕ್ಲಾಸಿನ ಹುಡುಗಿಯರಿಗೆ ಬಂದೋಬಸ್ತ್ ಮಾಡೋ ಜವಾಬ್ದಾರಿ ಮೆಕ್ಯಾನಿಕಲ್ ಹುಡುಗರದೆ.
ಬೇಲಿಯೇ ಎದ್ದು ಹೊಲ ಮೇಯುವ ಗಾದೆ ಮಾತಿನಂತೆ, ಹುಡುಗಿಯರನ ಪಟಾಯಿಸುವ ಕಾರ್ಯ ಯಾರದು ಅಂತ ಗೊತ್ತಾಗಿರಬಹುದು 

ಕಲ್ಚರಲ್ ಅಕ್ಟಿವಿಟಿಗಳಲ್ಲಿ ಇವರು ಎತ್ತಿತ ಕೈ ಆಟ, ಓಟ, ಕುಣಿತ ಹಾಗೂ ಇನ್ನಿತರ ಸಾಂಸ್ಕೃತಿಕ ಆಚರಣೆಗಳು ಇವರ ಮುಖ್ಯ ಕೆಲಸಗಳು

ಇಂದು ಶುಕ್ರವಾರ




ಮಗನ ಚೆಲ್ಲಾಟ, ಅಪ್ಪನ ತೂಗಾಟ 

ಇಂದು ಶುಕ್ರವಾರ,
೯೦ ಇಳಿಸುವಾರ,
ಗೆಳೆಯರೆಲ್ಲ ಸೇರಿ ಹೊಗೆಯ ಆಡಿಸುವಾರ

ಹೇಗೋ ಸರ್ಕಸ್ ಮಾಡಿ,
ಕುಡಿದು ಬಿಟ್ಟೆ ಓಡಿ ,
ಸೇದಲು ಸಿಗಲ್ಲಿಲ್ಲ ಒಂದೂ ಬೀಡಿ

ಅರಿವೇ ಇರಲಿಲ್ಲ ಒಂದು ಬಿಡಲಾರದ ಜೋಡಿ,
ಬಿಡಲಿಲ್ಲ ಮಗ ಕಾಡಿ ಕಾಡಿ,
ಮಲಗಿಸ್ ಬೇಕ್ ಅವನಿಗಿ ಮಕ್ಕಳ್ ಗೀತೆ ಹಾಡಿ ಕೊಂಡಾಡಿ,

ಮುಂದೆ ಬರುವ ಶುಕ್ರವಾರ,
ಬಾಯಿಗೆ ಕಟ್ಕೊ  ದಾರ ,
ಹೆಂಡ್ತಿಗಿ ಸಿಟ್ಟ  ಬಂದ್ರೆ ನಿನ್ನ್ ಫೋಟೋಗ್  ಬಿಳ್ತೆ ಹಾರ


ಒಬ್ಬ ವಿದ್ನಾಣಿಯ ಕಥೆ
ಮನೆಯೊಳಗಿನ ಹಳೆಯ ಸಾಮಾನುಗಳ್  ಉಪಯೋಗಿಸಿ
ತಲೆಯೊಳಗಿನ ಹುಳಗಳನ್  ಕೆರಳಿಸಿ,
ಅಳಿದುಳಿದ ವಿಚಾರಗಳನ್ ಅರಳಿಸಿ,
ಬಳಸಿ ತೆವಳಿಸಿ ಆಸಕ್ತಿಗಳನ್ ಬೆಳೆಸಿ,
ಹಳಿಸಿದ ಬುದ್ಧಿಗಳನ್ ಸುವಾಸನೆಗಳಿಸಿ
ತಯಾರಿಸಿದ ಸಾಮಗ್ರಿಗಳನ್, ಯಂತ್ರಗಳನ್ ನೋಡಲ್ ಬನ್ನಿ
ಪ್ರಕಾಶ್ ಸಿದರಡ್ಡಿಯ ಮನೆಯೊಳ್