Monday, June 6, 2011

ಸಾಫ್ಟ್ವೇರ ಎಫ್ಫೆಕ್ಟು, ಏನಿದ್ದ ಮನಷ್ಯ ಏನಾದ ಕಂಪುಷ್ಯ(ಕಂಪುಟರ + ಮನುಷ್ಯ)

ಆಗೊಂದಿತ್ತು ಕಾಲ ಗೆಳೆಯರೆಲ್ಲರೂ ಕಟ್ಟಿ ಮ್ಯಾಲ ಕುಂತ ಹರಟೆ ಹೊಡೀತಿದ್ದ್ರು,
ಈಗ ಬಂದೆತಿ ಕಾಲ ಫೆಸ್ಬುಕ್ಕಿನ್ಯಾಗ ಲಾಗಿನ್ ಆಗಿ ಚಾಟ್ ವಿಂಡೋ ನ್ಯಾಗ್ ಕ್ಲಿಕ್ ಹೊಡೀತಾರ.
ಆಗೊಂದಿತ್ತು ಕಾಲ ಹುಡುಗೀರ ಬೆನ್ನ ಹತ್ತಿ ರೋಡ್ ರೋಡ್ ನ್ಯಾಗ್ ಓಡಾಡಿ ಲೈನ್ ಹೊಡಿತಿದ್ರು,
ಈಗ ಬಂದೆತಿ ಕಾಲ ಸೈಟ್ ಸೈಟ್ ನ್ಯಾಗ್ ಅಡ್ಯಾಡಿ ಹುಡಿಗ್ಯಾರನ್ನ ಹುಡಿಕ್ಯಾಡ್ತಾರ

ಕಾಲೇಜಿನ್ಯಾಗ ಮಾಸ್ತರ ಡೌಟ್ ಇದ್ರ ಎಲ್ಲ ಕೇಳಿ ಇಲ್ಲೇ ಮುಗಿಸಿ ಹೋಗ ಅಂತಿದ್ದ
ಈಗ ನೋಡಿದ್ರ ಹೇಳ್ತಾನ ಲೈಟ್ ಆಗಿ ಒಂದ ಮೇಲ್ ಹಾಕು ನಾ ಆಫ್ ಲೈನ್ ನ್ಯಾಗ ರಿಪ್ಲೈ ಮಾಡ್ತೆನಿ
ಲ್ಯಾಬ್ ಇನಸ್ತ್ರಕ್ತ್ರಾರ್ ಮಷೀನ, ಪಕ್ಕಡ, ಪಾನ ಹಿಡಿದು ಸ್ಕ್ರೂ, ಬೋಲ್ಟ ತಿರುವು ಅತಿದ್ದ
ಈಗ ಮೌಸ ಕಿಬೋರಡ ಹಿಡಕೊಂಡ ಜ್ಹೂಮ ಮಾಡಿ ನೋಡ್ಕೋ ಅಂತಾನ

ಶನಿವಾರ ಬಂದ್ರ ದೊಸ್ತ್ರೆಲ್ಲರು ಹೋಟೆಲಿಗೆ ಊಟಕ್ಕ ಹೋಗ್ತಿದ್ದರು
ಈಗ ಯಾ ಸುಡಗಾಡ ದಾಗ ಕುಂತಿರ್ತಾರೋ ಗೊತ್ತಿಲ ಮಕ್ಳ ಆನ್ಲೈನ್ ಮಾತ್ರ ಇರತಾರ
ಹೋಗ್ಲಿ ಮೊದಲ ಏನೋ ಮೊಬೈಲ್ ಬಂದೆತಿ ಅಂತ ಎಸ್ ಎಂ ಎಸ್ ಆದ್ರು ಮಾಡ್ತಿದ್ದರು
ಈಗ ಆಫ್ ಲೈನ್ ಮೆಸೇಜ್ ಬಿಟಕೊಂತ ಹೋಗ್ತಾರ

ಏನ್ ಬಂತಪ್ಪ ಕಾಲ ದೋಸ್ತರ ಮೊಸುಡಿ ನೋಡುನು ಅಂದ್ರ ಆನ್ ಲೈನ್ ಬರಬೇಕು
ಮಾತಾಡುನು ಅಂದ್ರ ಆನ್ ಲೈನ್ ಬರಬೇಕು
ಕುಂತ ತಿನ್ನೂನು ಅಂದ್ರ ಆನ್ ಲೈನ್ ಬರಬೇಕು
ಜೀವನದ ಲೈನ್ ಎಲ್ಲಿ ಚಾಲೂ ಆಗಿತ್ತು ಎಲ್ಲಿ ಹೊಂಟೆತಿ ಗೊತ್ತಿಲ್ಲ, ಆದ್ರ ಆನ್ ಲೈನ್ ಮಾತ್ರ ಬರಬೇಕು, ಆನ್ ಲೈನ್ ಮಾತ್ರ ಬರಬೇಕು .....