Monday, June 6, 2011

ತಲೆ ತಲಾಂತರಗಳು ಹಾಗು ಅವರ ಡಯಲಾಗುಗಳು

ಅಜ್ಜ ಹೇಳ್ತಿದ್ದ,
ದಿನಾ ಬೆಳಗಾದ್ರ ವ್ಯಾಯಾಮ ಮಾಡು
ಹೊತ್ತ ಮುಳುಗುದ್ರಾಗ ಮನೀ ಸೇರು

ಅಪ್ಪ ಹೇಳ್ತಿದ್ದ,
ದಿನಾ ಬೆಳಗಾದ್ರ ಕನಿಷ್ಠ ಪಕ್ಷ ಹಲ್ಲಾದ್ರು ತಿಕ್ಕೋ
ಸಂಜಿ ಹೊಡಿಯೋದ್ರಾಗ ಹೊಟ್ಟಿಗಿ ಏನಾದ್ರೂ ಹಾಕ್ಕೋ

ಈವತ್ತು ನಾವೇನ್ ಹೇಳುನು ನಮ್ಮ ಈ ನನ್ನ ಕಲಿಯಗದ ___ ಮಕ್ಳಿಗೆ?
ನನ್ನ ಮಗನೆ ಬೆಳಕಾತು ಈಗರೆ ಆ ಕಂಪ್ಯೂಟರ್ ಬಿಡು
ನಿನ್ನ ಗರ್ಲ್ ಫ್ರೆಂಡ್ ಹಾದಿ ಕಾಯಾತಾಳು ಭೆಟ್ಟಿ ಅರೆ ಆಗಿ ಆದ್ರ ಬೆಳಗಾಗೊದ್ರಾಗ ಮತ್ತ ಮನೀಗೆ ಬಾ

1 comment:

ಸಿದ್ಧಾರ್ಥ said...

haha.. chennaagide chennaagide :)