Monday, August 22, 2011

ಲೈಫು ಇಷ್ಟೇನೆ ? ಇಲ್ಲ ಭ್ರಷ್ಟಾಚಾರ ಇಷ್ಟೇನೆ ?



ಖಾಲಿ ಜಾಗ ನೋಡ್ಕೊಂಡ್ ಬಿಟ್ಟ್ರು
ಕೈ ವಸ್ತ್ರನಾ ಹಾಸ್ಕೊಂಡ್ಬಿಟ್ರು
ಅಣ್ಣ ಅಣ್ಣ ಬಾಯಿ ಬಂಡ್ಕೊಂದ್ಬಿಟ್ರು
ಸರ್ಕಾರ್ ಲೋಕ್ಪಾಲ್ ಚೀಟಿ ಹರ್ದಾಕಿ ಬಿಟ್ರು
ಲೈಫು ಇಷ್ಟೇನೆ ...

ಅಲ್ಲಿ ಇಲ್ಲಿ ಸಪ್ಪೋರ್ಟು ಬಂತು
ಎಲ್ಲ ಕಡೆಯಿಂದ ಜನರು ಬಂದ್ರು
ಹಾಳಾಗ್ ಹೋಗ್ಲಿ ಸರ್ಕಾರ ಅಂದ್ರು
ಸರ್ಕಾರ ಅಂತು time ಕೊಡಿ ಅಂದ್ರು
ಲೈಫು ಇಷ್ಟೇನೆ

ಊಟ ಇಲ್ಲ ನಿದ್ದೆ ಇಲ್ಲ
ತಲೆ ಮೇಲೆ ಕೂದ್ಲ ಇಲ್ಲ
ಅಜ್ಜನ ಕೆಲಸಕೆ value ಇಲ್ಲ
ಬ್ರಷ್ಟ ಜನರಿಗೆ ಬುದ್ಧಿ ಇಲ್ಲ
ಲೈಫು ಇಷ್ಟೇನೆ

ನಾನು ಬಂದೆ ನೀವು ಬನ್ನಿ
ಪಕ್ಕದ ಮನೆಯವರನ್ನು ಕರ್ಕೊಂಡ್ ಬನ್ನಿ
ಎದೆ ತಟ್ಕೊಂಡ್ ಸಾರುತ ಬನ್ನಿ
ನಮ್ಮ ಭಾರತ ಮಹಾನ್ ಅನ್ನಿ
ಲೈಫ್ ಇಷ್ಟೇನೆ

ನಮಗೆ ಇಲ್ಲ ಅಂದ್ರೆ ಏನಾಯ್ತು ?
ಮಕ್ಕಳು ಮರಿಗಳು ಚೆನ್ನಗಿದ್ರಾಯ್ತು
ಅಣ್ಣ ಹಜಾರೆ ತ್ರಾಸು ತೊಗೊಂಡಆಯ್ತು
ನಿಮ್ಮ ಬುದ್ದಿಗೆ ಬೆಳಕು ಆಯ್ತು
ಲೈಫು ಇಷ್ಟೇನೆ

ಭ್ರಷ್ಟ ಜನರ ತಲೆ ಕೆಟ್ಟು ಹೋಗುತ್ತೆ
ಅಜ್ಜನ ಹಿಂದೆ ಜನ ಬಂದೆ ಬರುತ್ತೆ 
ಭ್ರಷ್ಟಾಚಾರ ತೊಲಗಿ ಹೋಗುತ್ತೆ
ಭಾರತ ಇನ್ನು ಉದ್ಧಾರ ಆಗುತ್ತೆ
ಲೈಫು ಇಷ್ಟೇನೆ...





No comments: