ಒಂದಾನೊಂದು ಕಾಲದಲ್ಲಿ ನಮ್ಮಜ್ಜ ಅಜ್ಜಿ ಮುಸ್ಸಂಜೆ ಹೊತ್ತಿನಲ್ಲಿ ಕಟ್ಟೆ ಮೇಲೆ ಕುಂತಕೊಂಡು ಕಥೆ ಹೇಳ್ತಿದ್ರು , ರಾಜ, ಹುಲಿ, ಸಿಂಹ, ಕಾಡು-ಮೇಡು... ಅದು ಇದು. ಆಹಾ ಹೆಂಗ ಇರತಿತ್ತು ಆ ದಿನಾ ...
ಈಗ ಜನಾ ಹೆಂಗ ಅದಾರ ಅಂದ್ರ ಬೆಳಗಾದ್ರ ಶೇರ್ ಮಾರ್ಕೆಟ್ ಚಾನೆಲ್ ಹಚ್ಚಕೊಂಡ moneycontrol .com ಓಪನ್ ಮಾಡ್ಕೊಂಡ್ ಶಿವಾ ಅಂತ ಕುಂದರತಾರ.
ನಮ್ಮ ಈ ತಳಿ(ಇಂಗ್ಲಿಷ್ ನ್ಯಾಗ್ ಹೇಳಬೇಕಂದ್ರ generation) ಮುದುಕರಾದ ಮ್ಯಾಲ ಕಥಿ ಹೆಂಗ ಇರಬಹುದು ಅಂತ ಊಹಾ ಮಾಡಿದ್ರ ನಂಗ ಹಿಂಗ ಅನಸ್ತೆತಿ ನೋಡ್ರಿ
ಮೊಮ್ಮಗ : ಅಜ್ಜ "I am not getting sleep, please tell me a story dude..."
ಅಜ್ಜ : (ಈ ದರಿದ್ರ ಇಂಗ್ಲಿಷ್ ಮೊದಲ ಬರೀ ಆಫೀಸ್ ನ್ಯಾಗ ಅಟ್ಟ ಮಾತಾಡಿದ್ವಿ, ಇವನಜ್ಜಿ ಮನ್ಯಾಗ್ ಸುದ ಹಿಡಕೊಂಡಬಿಟ್ಟೆತಿ ನೋಡ). ನನ್ನ ಪ್ರೀತಿ ಮಮ್ಮಗನ ಕಥಿ ಏನೋ ಹೇಳತೆನಿ ಖರೆ ಪೂರಾ ಕನ್ನಡ ದಾಗ ಹೇಳತೆನಿ ಓಕೆ?
ಮೊಮ್ಮಗ : "ok no problem..."
ಅಜ್ಜ : ಒಂದಾನೊಂದು ಕಾಲದಾಗ ಒಂದು ದೊಡ್ಡ ಮಾರುಕಟ್ಟೆ ಇತ್ತು ಅಲ್ಲಿ ಒಂದು ಭಾರಿ ಚೆಂದ ಗಟ್ಟಿ ಮತ್ತ ನಂಬಿಗಸ್ತ ಶೇರ್ ಇತ್ತು, ಅದರ ಹೆಸರ ಸತ್ಯ-ಅಮ್ಮ ಅಂತ ಇತ್ತು
ಆವಾಗ ರಾಮು ಅನ್ನು ಒಬ್ಬ ಶಾನೆ ಹುಡುಗ ಅದನ್ನ ನಡಿಸ್ತಿದ್ದ, ಏನೋ ಬೆವರ ಸುರಿಸಿ ಏ.ಸಿ ನಲ್ಲಿ ಕುಂತ ಕೆಲಸ ಮಾಡಿ ಚೊಲೋ ಹೆಸರ ಗಳಿಸಿದ್ದ. ಅವನಿಗೆ ಇರಾಕ್ ಐಶಾರಾಮಿ ಮನೆ, ತಿರುಗಾಡಾಕ ಕಾರು, ಬಂಗಲೆ ಎಲ್ಲ ಇತ್ತು.
ಮೊಮ್ಮಗ : ಅಜ್ಜ ಹಂಗ ಅಂದ್ರ ರಾಮು ಏನ ಕೆಲಸ ಮಾಡ್ತಿದ್ದ ?
ಅಜ್ಜ : ಅವ ಸರ್ವಿಸ್ ಮಾಡ್ತಿತ್ತ, ಅಂದ್ರ ಜಗತ್ತಿನ್ನ ದೊಡ್ಡ ದೊಡ್ಡ ಸಾಫ್ತ್ವರೆ ಕಂಪನಿಗಳ ಪ್ರಾಡಕ್ಟು ಮತ್ತ ಸರ್ವಿಸ್ ಔಟ್ ಸೌರ್ಸ ಮಾಡಿಸ್ಕೊಂಡ ರೊಕ್ಕ ಗಳಿಸ್ತಿದ್ದ
ಖರೆ ಒಮ್ಮೆ ಏನಾಯ್ತು ಅಂದ್ರ, ರಾಮು ಸ್ವಲ್ಪ ಶಾನೆತನ ಮಾಡಿ ಮಂದಿಗೆ ಎಲ್ಲ ನಾ ಈಗ ಭಾರಿ ದೊಡ್ಡ ದೊಡ್ಡ ಕಂಪನಿಗಳ ಜೋಡಿ ಕೆಲಸಾ ಮಾಡಾವ ಅದೇನಿ, ಮತ್ತ ನನ್ನ ಕಡೆ ಇಷ್ಟ ರೊಕ್ಕ ಐತಿ, ಅದು ಐತಿ, ಇದು ಐತಿ ಅಂತ ಸುಳ್ಳ ಹೇಳಿ, ಎಲ್ಲರಿಗು ಸುದ್ದಿ ಹಬ್ಬಿಸಿದ
ಆಗ ಮಂದಿ, "ಎಲ್ಲಿ ಬೆಲ್ಲ, ಅಲ್ಲಿ ಇರಿವಿ", ಅದಕ್ಕ ಎಲ್ಲಾರು ಹೋಗಿ ರಾಮು ನೀ ಅದನ್ನ ಮಾಡು, ನೀ ಇದನ್ನ ಮಾಡು... ನಿಂಗ ಎಷ್ಟ ರೊಕ್ಕ ಬೇಕು ತೊಗೋ... ಖರೆ ನಂಗ ಲಾಭ ಮಾಡು ಅಂತ ರೊಕ್ಕ ಕೊಟ್ಟಿದ್ದ ಕೊಟ್ಟಿದ್ದ ... ಆದ್ರ ರಾಮು ಏನ ಮಾಡತಾನ, ಎಲ್ಲ ರೊಕ್ಕ ಗಂಟ ಕಟ್ಟಿ ಇನ್ನೊಂದ ಜಾಗ ಕಳಿಸು ವಿಚಾರ ಮಾಡ್ತಾನ, ಪುತ್ರ ವ್ಯಾಮೋಹ ನೋಡು , ಎಲ್ಲರಿಗು ಇರುದನ... ಆವಾಗ ಏನೋ ರೊಕ್ಕ ಕೊಟ್ಟವರ ನಸೀಬ್, ರಾಮು ಸಿಕ್ಕೊಂಡ ಬಿದ್ದ .... ಖರೆ ಏನ್ ಮಾಡುದು ? ರೊಕ್ಕ ಎಷ್ಟ ಎಲ್ಲಿ ಮತ್ತ ಯಾರ್ ಯಾರಿಗೆ ಕೊಟ್ಟರು ಅಂತ ಯಾರಿಗೂ ಗೊತ್ತಿಲ್ಲ .... ಖರೆ ರಾಮು ಅರೆ ಸಿಕ್ಕ ಅಲ್ಲ ಅಂತ ಸಿಕ್ಕಸ್ಟ ರೊಕ್ಕ ಕಿತಕೊಂಡ ಮಂದಿ ರಾಮುನಾ ಪೊಲೀಸರಿಗೆ ಕೊಟ್ಟರು .... ರಾಮು ಹೊಡ ಜೈಲಿಗಿ, ಮಂದಿ ಹೋದರು ಮನಿಗೆ, ರೊಕ್ಕ ಹೋತು ಗಾಳಿಗೆ
ಮೊಮ್ಮಗನೇ, ಈಗ ಹೇಳು ನಿಂಗೆ ಏನ್ ತಿಳೀತು ಈ ಕಥಿ ಕೇಳಿ ?
ಮೊಮ್ಮಗ : ಅಜ್ಜ,
ಮೊದಲು , ಅತೀ ಆಸೆ ಮಾಡಬಾರದು.
ಎರಡು, ಆಸೆ ಮಾಡಿದ್ರು ಅದನ್ನ ಪೂರಾ ಮಾಡಿ ಕೊಳ್ಳಲು ನಮ್ಮ ಹತ್ರ ಶಕ್ತಿ ಐತೋ ಇಲ್ಲೋ ನೋಡ್ಬೇಕು, ಶಕ್ತಿ ಇದ್ದರು ಎಷ್ಟ ಐತಿ ಗೊತ್ತ ಇರಬೇಕು
ಮೂರೂ, ಆಮೇಲೆ ಕೆಲಸಕ್ಕೆ ಕೈ ಹಾಕಬೇಕು ಮತ್ತು ನಿನ್ನ ಸ್ವಂತ ಕೆಲಸಕ್ಕೆ ಬೇರೆಯವರ ಮುಂದೆ ಕೈ ಚಾಚ ಬಾರದು
ನಾಲ್ಕು, ಕೊನೆಗೆ ಜನರನ್ನು ನಬಿ ಮೋಸ ಹೋಗ ಬಾರದು
ಇಷ್ಟ ಗೊತ್ತ ಆತು ನೋಡ ಅಜ್ಜ ....
ಅಜ್ಜ : ಎಲಾ ಮಗನೆ ಭಾರಿ ಶಾನೆ ಆಗಿ ಅಲ್ಲ ನೀ ?
ಮೊಮ್ಮಗ : dude, ಈ ಕಥೆ ನಾ ಇಂಟರ್ನೆಟ್ ಒಳಗ ೪ ವರ್ಷ ಹಿಂದ ಒದೆನಿ, ಬ್ಯಾರೆ ಏನರೆ ಹೇಳಪ್ಪ ....
No comments:
Post a Comment