ವರುಷಕ್ಕೆ ಒಮ್ಮೆ ಜ್ವರ ಬಂದಂತೆ ,
ವಯಸ್ಸಾದಾಗ ತಲೆಯ ಕೂದಲು ಹಾರಿ ಹೋದಂತೆ ,
ಕೆಮ್ಮು ನೆಗಡಿ ಬಂದು ಹೋದಂತೆ ,
ಕೊರೊನ ಬಂದು ಹೋಗುತ್ತೆಯೆ ?
ನಿನ್ನ ಜೀವ ಗಟ್ಟಿ ಇರಬಹುದು ,
ನಿನ್ನ ಶಕ್ತಿ ಮೇಲಿರಬಹುದು ,
ನಿನ್ನ ಯುಕ್ತಿ ಜಾಸ್ತಿ ಇರಬಹುದು ,
ನಿನ್ನ ಕಾಲ ನಿನ್ನ ಕೈಯಲ್ಲಿರುವುದೇ ?
ಗಾಳಿಯಲ್ಲಿ ಹೊಗೆ ಮಾಯವಾದಂತೆ,
ದಿನದಿಂದ ಬೆಳಕು ಮಾಯವಾದಂತೆ,
ದೇಹದೊಳ್ ಜೀವ ಮಾಯವಾಯಿತೇ?
ಪ್ರಭುಪಾದ ಸೇರಿಹೋಯಿತೆ ?
ಜೀವಮಾನದಲ್ಲಿ ನೋಡದ ಜೈಲಿನ ಗೋಡೆ ,
ಜನ ಜಾತ್ರೆಯಲಿ ಮಾಡಿದ ಜೀವನ ,
ನನ್ನ ಮನೆ ಒಂದು ನಂದನವನ ,
ಈಗ ಅದೇ ಮನೆ ಸೆರೆಮನೆ ಆಗಿಹೋಯಿತೇ?