ರಾತ್ರಿ ತುಂಬಾ ಒದ್ದಾಡಿ , ಕುಣಿದಾಡಿ , ಚೀರ್ಯಾಡಿ, ಆಟ ಆಡಿ ,ನನ್ನ್ ತೋಡಿ ಮ್ಯಾಲ ಉಚ್ಚಿ ಹೊಯ್ದು, ಆಕಡೆ ಈಕಡೆ ನೋಡ್ಕೊಂತ ,ಆಗೊಮ್ಮೆ ಈಗೊಮ್ಮೆ ನಕ್ಕ-ನಗಿಸ್ಕೊಂತ ಆಡಿದ್ದ ಆಡಿದ್ದು , ಆಡಿದ್ದ ಆಡಿದ್ದು ... ನನ್ನ ಮಗಾ ಆರ್ಯನ್ .
ಹೆಂಗೋ ಏನೋ ಮಾಡಿ, ಹಾಡಾ-ಗೀಡಾ ಹಾಡಿ ಜೋಳಿಗಿ ಒಳಗ ಹಾಕಿ, ಎಲ್ಲ ಥರಾ ಸರ್ಕಸ್ ಮಾಡಿ ಕಡೀಕು ಮಗನ್ನ ಮಲಗಿಸೆ ಬಿಟ್ನಿ ನೋಡ್ರಿ
ಆಗ ಮುಗೀತು ನನ್ನ ಪಾಳೆ !!! ನನ್ನ ಮನ್ಯಾಕಿಗೆ ಹೇಳಿದ್ನಿ , ನೋಡಪಾ ನಂಗಂತೂ ಖತರ್ನಾಕ್ ನಿದ್ದಿ ಬಂದೆತಿ, ಇನ್ನೆನರೆ ಅವ ಎದ್ದರ ನಿಂದ ಜವಾಬ್ದಾರಿ ನೋಡ್. ಅಂತ ಹೇಳಿ ನಾ ನಿದ್ದಿ ಮಾದಕತ್ತ್ನಿ.
ಆಹ ಏನ್ ನಿದ್ದಿ ಪಾ ಅದು, ೯ ವರ್ಷದ ಹಿಂದ ಇಂಜಿನಿಯರಿಂಗ್ ದಾಗ M4 ಗೇಟ್ ಗೆ ಬಂದಾಗ ಹಿಂತ ನಿದ್ದಿ ಮಾಡಿದ್ದೆ ನೋಡ್ರಿ. ಅಂದ್ರ ಅಷ್ಟ ಅಂಜಿಕಿ, ಯಾವಾಗ್ ಎಳ್ತಾನೋ ಏನ್ ಮಾಡ್ತಾನೋ ಅಂತ... ಆದ್ರು ನನ್ನ ನಸೀಬ್ ಏನು ಕಾಡಲಿಲ್ಲ.
ಮುಂಜಾನೆ ಎದ್ದು ನೋಡ್ತೆನೀ, ಮಗ ನಂಕಿ ಮೊದಲ ಎದ್ದು ಬೆಡ್ರೂಮ್ ಕಿಡಕಿ ನೋಡ್ಕೊಂತ ಮಲಗಿದ್ದ !!! ಹೋಗ್ಲಿ ಯಾಕೋ ಆವಾಜ್ ಮಾಡ್ತಿಲ್ಲ, ಹಲ್ಲ-ಗಿಲ್ಲ ತಿಕ್ಕೊಂದು ಚಾ ಕುಡದು, ಸ್ವಲ್ಪ ಮಗನ ಜೋಡಿ ಆಟ ಆಡಿ ಆಫಿಸಗೆ ಹೋಗುನು ಅಂತ ಬ್ರುಶ್ ಬಾಯಾಗ್ ಹಾಕಿದ್ದ ತಡ, "ಅಆವ್ ಅಆವ್ " ಅಂದ ನೋಡ್ರಿ ಚಿಟಿಮ್ಯ. ಭರ ಭರ, ಘಸ ಘಸ ಅಂತ ಹಲ್ಲ ತಿಕ್ಕೊಂಡು ಮತ್ತ ಪಾಳೆ ಶುರು!!!
ಮತ್ತ ನಮ್ಮಕಿ ಚಾ ಮಾಡಿ ಕೊಟ್ಳು, ಏನ್ ಮಾಡ್ತೀರಿ, ನನ್ನ ಜಿಂದಗಿ ಒಳಗ ಅಸ್ಟ ಜಲ್ದಿ ಚಾ ಕುಡದಾವ ಅಲ್ಲ ನಾ, ಅವತ್ತು ೨ ಮಿಂಟ ಒಳಗ ವಾಟೆ ಖಾಲಿ!
ಹೆಂತಿ ಕಯ್ಯಾಗ್ ಕೂಸನ ಕೊಟ್ಟ, ಜಳಕ ಮಾಡಿ, ಅರಿಬಿ ಇಸ್ತ್ರಿ ಮಾಡಿ , ಕಾಟ ಮ್ಯಾಲ್ ಇಟ್ಟು, ದೀಪ ಹಚ್ಚಿ, ವಾಪಸ್ ಅರಿಬಿ ಹಕ್ಕೊಳುನು ಅಂತ ರೂಮಿಗಿ ಬನ್ನಿ ನೋಡ್ರಿ... ಸುಪುತ್ರ ನನ್ನ ಇಸ್ತ್ರಿ ಅರಿಬಿ ಮ್ಯಾಲ್ ಸೂಸು ಮಾಡಿದ್ದ ನೋಡ್ರಿ....