Tuesday, August 24, 2010

ರೂಮ ನಂಬರ ೬೧ ಮತ್ತು ೬೨ ರ ಇನ್ನೊಂದು ಕಥೆ

ಆವತ್ತು ಒಂದು ದಿನ ನಮ್ಮ ಸಂಭಾವಿತ ಹುಡುಗ ಬಸು, ಘಾಡ ನಿದ್ರೆಯಲ್ಲಿ ತೇಲಾಡುತ್ತ ಅವನ ಚಿಕ್ಕ ಗಾದಿಯ ಮೇಲೆ ಉಳ್ಲಾಡುತ್ತ ಮಲಗಿದ್ದ. ಬಹುಷಃ ಸಮೀಪದ್ರಲ್ಲಿ ಇಂಟರ್ನಲ್ ಏನೋ ಇತ್ತು ಅನಿಸುತ್ತೆ (ಯಾಕಂದ್ರ ನಾನು ಪುಸ್ತಕ ಹಿಡಕೊಂಡು ಕುಂತಿದ್ದೆ, ಸಹಜವಾಗಿ ನನ್ನ ಕೈಯಲ್ಲಿ ಪುಸ್ತಕ ಕಾಣೋದು ವಿರಳ!!! ).

ಬಸು ಸಣ್ಣ ನಗೆ ಕನಸ್ನ್ಯಾಗೆ ಬಡಬಡಸಾಕ ಶುರು ಹಚಕೊಂಡ, "ಹಲೋ ಸ್ವಲ್ಪ ಸವಿ ನ ಕರೀತಿರಿ? "(ಹುಡುಗ ಕನಸಿನೊಳಗ ಹುಡುಗೀಗೆ ಫೋನ್ ಮಾಡ್ಯಾನ !!!, ಮತ್ತ ನನಸಿನೋಳಗ ಬಡಬಡಸಾತಾನ!!!).
ನಮಗೂ ಇಷ್ಟ ಸಾಕಾಗಿತ್ತು ಪುಸ್ತಕ ಬಿಟ್ಟ ದೂರ ಸರಿಯಾಕ, ತೊಗೊ ಮಗಾ ಸಿಕ್ಕ ನೋಡು ಕಾಡಾಕ ಅಂತ ಅನಕೊಂತ ನಾನ್ ಬಸುನ ಬೆಡ್ ಬಾಜೂಕ ಕುರ್ಚಿ ಸರಿಸ್ಕೊಂಡ ಕುಂತ ಬಿಟ್ಟೆ ನೋಡ್ರಿ.

ಸಣ್ಣಗೆ ಬಸು ಫೋನ್ ಒಳಗೆ (ಅಂದ್ರ ಬಡಬಡಸ್ಕೊಂತ) ಊರ ಸುದ್ದಿ ಮಾತಾಡಾಕ ಶುರು ಹಚಕೊಂಡಿದ್ದ . ನಾನೂ ಬಿಟ್ಟೆನ್ ಏನ, ನಡು ಬಾಯಿ ಹಾಕಿ ಮಾತಾಡಾಕ ಶುರು ಮಾಡಿದೆ,"ಏನ್ ಬಸು ನಿಮ್ಮ ರೂಮಿನ್ಯಾಗ್ ಎಲ್ಲಾರೂ ಅರಾಮ ಅದಾರಾ ?" (ಬಸ್ಸು ಒಮ್ಮಕ್ಕಲೆ ಪ್ಲೇಟ್ ಚೇಂಜ್ ! )"ಹಾ ಆರಾಮ್ ಅದಾರ್".(ಬಸು ಗೆ ಇನ್ನು ಖಬರ್ ಇಲ್ಲ, ನನ್ನೇ ಸವಿ ಅಂತ ತಿಳಕೊಂಡು ಇನ್ನೂ ಸಂಭಾಷಣೆ ಚಾಲೂ ಇಟ್ಟ), ಆವಾಗ ನಾನು "ಅಮೀತ ಹೆಂಗ ಅದಾನು ?" ಅಂತ ಕೇಳಿದೆ, ಬಸು: "ಹೂ ಅವನೂ ಅರಾಮ ಅದಾನ ", ಬಸು : "ಹೌದು ಅಮೀತ ನಿಂಗ ಹೆಂಗ ಗೊತ್ತು ?", (ಬಸು ಇನ್ನೂ ಕನಸಿನ್ಯಾಗ ನನ್ನೇ ಸವಿ ಅಂತ ತಿಳಕೊಂಡು ಮಾತಾಡಾತಾನ ಪಾಪ !) ನಾನು :"ಇಲ್ಲ ಸ್ವಲ್ಪ ದಿನದ ಹಿಂದ ಅವಾ ನಂಗ ಫೋನ್ ಮಾಡಿದ್ದ, ಹೆಂಗೋ ನನ್ನ ನಂಬರ್ ಸಿಕ್ಕಿತ್ತೋ ಏನೋ !", ಬಸು(ಶಾಕ್!): "ಒಹ್, ಮತ್ತೇನ್ ಮಾತಾಡಿದ ಅವ ?" ನಾ : "ಏನಿಲ್ಲ ನಿನ್ನ ಬಗ್ಗೆನ ಏನೋ ಹೇಳ್ತಿದ್ದ ಅಷ್ಟ "
ಅಷ್ಟರಲ್ಲಿ ಏನ್ ಆತೋ ದೇವ್ರಿಗೇ ಗೊತ್ತ, ಫೋನ್ ಕಟ್ಟ ಆತು, ಬಸೂನ ಕನಸೂ ಮುಗೀತ!. ಬಸು ಸ್ವಲ್ಪ ಹೊತ್ತ ಆದ ಮ್ಯಾಲೆ ಎದ್ದ ನೋಡ್ರಿ AS USUAL.

ಇದೆಲ್ಲ ಆದಿದ್ದು ಎಲ್ಲಾರ್ ಮುಂದ, ಅಂದ್ರ ಅಜೀತ, ಮಜ್ಜಿಗಿ(ಚಂದ್ರು) ಮತ್ತ ನಾ. ಬಸು ಏಳುದ ತಡ ಎಲ್ಲಾರು ನಕ್ಕಿದ್ದ ನಕ್ಕಿದ್ದ... ಬಸೂಗ ಏನೂ ತಿಳಿಲಿಲ್ಲ, ಆಮ್ಯಾಲ ನಾನ ಸ್ವಲ್ಪ ಹವಾ ಹಾಕಿ ಬಸುಗ ಕೇಳಿದ್ನಿ, ಯಾಕೋ ಬಸು ಸವಿಗೆ ಫೋನ್ ಮಾಡಿದ್ದೆ ಏನ್? ಬಸು ಫುಲ್ ಘಾಬರಿ! (ಅಲಾ ಇವನ, ಇವನ್ಗ ಹೆಂಗ ಗೊತ್ತ ಆತು!). ನಾ : "ನನ್ನ ಬಗ್ಗೆ ಏನರೆ ಹೇಳಿದಳು ?" ಬಸು: "ಹೂ, ನೀ ಏನೋ ಫೋನ್ ಮಾಡಿದ್ದೆ ಅಂತ ಆಕಿಗಿ?"
ಬಸು ಇಷ್ಟ ಅನ್ನೂದ ತಡ ಬಾಕಿ ಮೂರೂ ಮಂದಿ ಬಿದ್ದ ಬಿದ್ದ ನಕ್ಕಿದ್ದ ನಕ್ಕಿದ್ದ... ಬಸುಗ ಇನ್ನೂ CONFUSION . ಸ್ವಲ್ಪ ಹೊತ್ತ ಅವನಿಗೂ ಏನ್ ಹೇಳಬೇಕು ಅಂತ ತಿಳಿತಿಲ್ಲ, ಮತ್ತ ನಮಗೂ ಮಜಾ ಬಂದಿದ್ದ ಬಂದಿದ್ದ.

ಆಮೇಲೆ ನಾ ಹೇಳಿದ್ನಿ ನೋಡ್ರಿ, ಬಸು ದೋಸ್ತ, ನೀ ಕನಸಿನ್ಯಾಗ ಬಡಬಡಸಾತಿದ್ದಿ , ಅದನ್ನ ಕೇಳಿ ನಾ ನಿನ್ನ ಜೋಡಿ ಹಿಪನೋಟೀಸಮ ಮಾಡವ್ರ ಥರ ಮಾತಾಡಿದೆ, ಮತ್ತ ನಿಂಗ ಅದರ ಸುದ್ದಿನೂ ಬರಲಿಲ್ಲ ಹ ಹ ಹ ಅಂತ ನಕ್ಕೆ ಬಿಟ್ಟೆ, ಅವಾಗ ಬಸೂನ ಮುಖ ನೋಡ ಬೇಕಿತ್ರಿ, ಇತ್ತ ನಗಲೋ ಇಲ್ಲ ಹ್ಮ್ಮ್ಮಮ್ಮ್ಮ್ಮ್ ಅಂತ ಕುಂದ್ರಲೋ ಏನೂ ತಿಳಿವಾತಾಗಿತ್ತು ...